Tuesday, October 03, 2006

ನನ್ನ ಬುತ್ತಿಯ ಮೊದಲ ತುತ್ತ್ತು....

.. ಇದು ಬದುಕಿನ ಕೊಂಡಿ
ಜೀವ ಜೀವಂತಿಕೆಯ ಕಿಂಡಿ
ಯಾರೂ ಇಣುಕಬಹುದು ಇಲ್ಲಿ
ಕೊಂಕು ಕೆಣಕು ಇಲ್ಲಿಲ್ಲ
ನೋವು-ನಲಿವು, ಒಲವು-ಗೆಲುವು
ನಮ್ಮದು ನಿಮ್ಮದು ... ಎಲ್ಲರದು ಇಲ್ಲಿ ....

'ಅನಸುಯಾ ಸಿಧ್ಧರಾಮ' ನನ್ನ ಗುರುತಿನ ಹೆಸರು,
ಓದು, ಬರೆಹ ನನ್ನ ಹವ್ಯಾಸ... ಹುಚ್ಚು,
ನನ್ನ ಪ್ರೀತಿಯ ಹುಚ್ಚಿಗೆ ಎಚ್ಚ ಎರೆದವರು, ಸಂಗಾತಿ ಸಿಧ್ಧರಾಮ,
ಸಾಹಿತ್ಯ ನನ್ನ ಖುಷಿ, ಸಾಹಿತಿಗಳು ನನ್ನ ಅಭಿಮಾನ,
ಮೊದಲ ಬರಹ ಅಚ್ಚು ಹಾಕಿದ್ದು ತುಷಾರ. ಅದು, 1980 ರ ಹೊತ್ತು, ನಂತರದ್ದೆಲ್ಲ, ತರಂಗ, ಸುಧಾ, ಮಲ್ಲಿಗೆ, ಸಂಯುಕ್ತ ಕರ್ನಾಟಕ, ಸುದ್ದಿ ಸಂಗಾತಿ, ಕನ್ನಡ ಸಾಹಿತ್ಯಪರಿಷತ್ತು, ಕನ್ನಡ ಸಾಹಿತ್ಯ ಅಕಾಡಮಿಯ ಪುಸ್ತಕಗಳು ಮತ್ತು ಧಾರವಾಡ ನಿಲಯದ ಬಾನುಲಿ ಕದ ತೆರೆದದ್ದು.

ಬರೆಯಲು ಹಚ್ಚಿದಾ ಆಸಕ್ತಿ.... ಓದುಗರ ಅನಿಸಿಕೆ ಅರಿಯುವ ಕಾತರ ಹುಟ್ಟು ಹಾಕುತ್ತದೆ,
ಹಂಚಿಕೊಂಡಾಗ ............... ಭಾವುಕತೆ ಆಪ್ತವಾಗಿ ಕಟ್ತಿ ಹಾಕುತ್ತದೆ...
ಹಾಂ.... ಹೀಗೆ, ನನ್ನ ಕುತೂಹಲ, ಕೌತುಕ, ಕಾಳಜಿ-ಕಳಕಳಿ ಭಾವ ಬಂಧುರತೆಯ ಬುತ್ತಿಗಂಟು ಬಿಚ್ಚಿಡುವ ಬಯಕೆ, ಪರಸ್ಪರ ಸನಿಯ ಕುಂತು, ಸವಿಯುವ ಆಸೆ.

ಇಗೊಳ್ಳಿ ಇಂದಿನಿಂದ ನನ್ನ ಬುತ್ತಿಯ ಒಂದು ತುತ್ತು ನಿಮಗೆ....
ನಿಮ್ಮ ಬುತ್ತಿಯ ಒಂದು ತುತ್ತು ನನಗೆ,

ಸರಿ ...... ಬಿಚ್ಚಿಡಲೇ .... ನನ್ನ ಬುತ್ತಿ...?!

'ಅನಸೂಯ ಸಿಧ್ಧರಾಮ್'

5 comments:

Anonymous said...

bega bega kodi. doddda dodda butti katti!

ರವಿಪ್ರಕಾಶ್ Raviprakash said...

ಯಾಕೋ ಬುತ್ತಿ ಬರಿದಾದಂತಿದೆ! ಸವಿಯುವ ಮೊದಲೇ ಬುತ್ತಿ ನೆಲಕ್ಕೆ ಚೆಲ್ಲಿ ಮಣ್ಣಾಗಿ ಹೋಯಿತೆ?

ಆಸೆ ತೋರಿಸಿ, ಕಾದಿರುವ ಹಸಿದ ಕಂದಮ್ಮಗಳನ್ನ ಮರೆತಿರಾ?

ಶ್ರೀನಿವಾಸಗೌಡ said...

nimma blagina modala thuthu channagige reee.... hage munduvresi... pls

N C S S said...

ನಿಮ್ಮ ಭುತ್ತಿ ಯು ತುಂಬುವುದರ ಬಗ್ಗೆ ಗಮನ ಹರಿಸಿ ಲೇಖನ ಲೇಖನಿಯಿಂದ ನಿರಂತರ ಹರಿಯುತಿರಲಿ ನಿಮ್ಮಲ್ಲಿ ನನ್ನ ಮನವಿ www.chanakshakannada.blogspot.com/ kannadachanaksha.blogspot.com ಇದು ನನ್ನ ವೆಬ್ ಗಳು ಇವುಗಳನ್ನು ಪ್ರಚಾರ ಮಾಡುವ ವಿಧಾನದ ಬಗ್ಗೆ ದಯವಿಟ್ಟು ಮಾಹಿತಿ ನೀಡಿ

N C S S said...

nanna website site ottidhare nimmadhu barothe ,,yake friend ,,nanna hesaru sathish acharya websites ,kannadachanaksha.blogspot.com/chanakshakannada.blogspot.com